ದನದ ಕರುವಿನ ಜೊತೆ ಬಲವಂತ ಲೈಂಗಿಕ ಕ್ರಿಯೆ ನಡೆಸಿದ ವಿಕೃತ ಕಾಮಿಗೆ ಧರ್ಮದೇಟು

ಮಂಗಳೂರು ಜುಲೈ 17: ವಿಕೃತ ಕಾಮಿಯೊಬ್ಬ ಹಸುವಿನ ಕರುವೊಂದರ ಮೇಲೆ ಬಲವಂತದಿಂದ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಸಾರ್ವಜನಿಕರ ಕೈಗೆ ಸಿಕ್ಕಬಿದ್ದ ಘಟನೆ ನಡೆದಿದೆ.

ಮಂಗಳೂರು ಹೊರವಲಯದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜತ್ತಬೈಲ್ ಎಂಬಲ್ಲಿ ಈ ಘಟನೆ ನಡೆದಿದೆ. ವಿಕೃತ ಕಾಮಿಯನ್ನು ಮೊಹಮ್ಮದ್ ಅಜರ್ ಅನ್ಸಾರಿ ಎಂದು ಗುರುತಿಸಲಾಗಿದ್ದು ಈತ ಬಿಹಾರ ಮೂಲದ ಕೂಲಿ ಕಾರ್ಮಿಕನಾಗಿದ್ದಾನೆ.

ಮೇಯಲು ಕಟ್ಟಿ ಹಾಕಿದ ಕರುವಿನ ಮೇಲೆ ಅನ್ಸಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದು, ಇದನ್ನು ಗಮನಿಸಿದ ಸ್ಥಳೀಯ ಯುವಕರು ಕರುವನ್ನು ರಕ್ಷಿಸಿಸಿದ್ದು, ಯುವಕನಿಗೆ ವಿಚಾರಿಸಿದ್ದಾರೆ, ಪ್ರದೇಶದಲ್ಲಿ ಯಾರೂ ಇರದ್ದನ್ನು ಕಂಡು ವಿಕೃತ ಕಾಮಿ ಅನ್ಸಾರಿ ಈ ಕೃತ್ಯ ಎಸಗಿದ್ದು ಸಾರ್ವಜನಿಕರು ಗಮನಿಸಿ ಮೊಬೈಲಿನಲ್ಲಿ ಚಿತ್ರೀಕರಿಸಿದ್ದಾರೆ. ಬಳಿಕ ಆತನನ್ನು ದಬಾಯಿಸಿ, ಥಳಿಸಿದ್ದು ಮೊಬೈಲ್‍ನಲ್ಲಿ ಸೆರೆಯಾಗಿದೆ.

128SHARES

Facebook Comments

0 comments